ಲಂಡನ್​ನಲ್ಲಿನ ಉದ್ಯೋಗ ಬಿಟ್ಟು ಬಂದು, ಮೊದಲ ಪ್ರಯತ್ನದಲ್ಲೇ IAS

True Media Kannada:- ಸೌಮ್ಯ ಅಗರ್ವಾಲ್ ಅವರು ಕೂಡ ಇಂಜಿನಿಯರಿಂಗ್ ಮಾಡಿದ ಬಳಿಕ ಲಂಡನ್ ನಲ್ಲಿ ಉದ್ಯೋಗ ಪಡೆದುಕೊಂಡಿದ್ದರು. ಆದರೆ ತವರು ದೇಶ ಅವರನ್ನು ಕೈಬೀಸಿ ಕರೆದಿತ್ತು. ಮುಂದೇನಾಯ್ತು ಎಂದು ಐಎಎಸ್ ಸೌಮ್ಯ ಅಗರ್ವಾಲ್ ಅವರ ಸ್ಟೋರಿಯಲ್ಲಿ ತಿಳಿಯೋಣ.
ವಿದೇಶದಲ್ಲಿ ಒಳ್ಳೆಯ ಉದ್ಯೋಗಗಳನ್ನು ಬಿಟ್ಟು ಭಾರತದಲ್ಲಿ ಸಾರ್ವಜನಿಕ ಸೇವೆಯನ್ನು ಆಯ್ಕೆ ಮಾಡಿಕೊಂಡಂತಹ ಕೆಲವು ಉದಾಹರಣೆಗಳು ನಮ್ಮ ಸುತ್ತಮುತ್ತ ಇವೆ. ಅನೇಕ ಐಎಎಸ್ ಅಧಿಕಾರಿಗಳು ಲಂಡನ್-ಅಮೆರಿಕಾದ ಕೆಲಸವನ್ನು ತೊರೆದು ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಇವರಲ್ಲಿ ಐಎಎಸ್ ಸೌಮ್ಯ ಅಗರ್ವಾಲ್ ಕೂಡ ಸೇರಿದ್ದಾರೆ.
ಐಎಎಸ್ ಸೌಮ್ಯ ಅಗರ್ವಾಲ್ ಅವರು ದೆಹಲಿ ವಿಶ್ವವಿದ್ಯಾಲಯದಿಂದ ಸಾಫ್ಟ್ ವೇರ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಂತರ 2004ರಲ್ಲಿ ಪುಣೆಯ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದರು.

ಕೆಲವು ತಿಂಗಳುಗಳ ನಂತರ, ಕಂಪನಿಯು ಅವರನ್ನು ಒಂದು ಯೋಜನೆಗಾಗಿ ಲಂಡನ್ ಗೆ ಕಳುಹಿಸಿತು. ಸೌಮ್ಯ ಅಗರ್ವಾಲ್ ಲಂಡನ್ ನಲ್ಲೇ ಎರಡು ವರ್ಷಗಳ ಕಾಲ ಕೆಲಸ ಮಾಡಿದರು. ನಂತರ ಅವರು ಭಾರತಕ್ಕೆ ಮರಳಿದರು.
ಲಂಡನ್ ನಲ್ಲಿ ವಾಸಿಸುತ್ತಿದ್ದಾಗ ಸೌಮ್ಯ ತನ್ನ ತಂದೆಗೆ ಫೋನ್ ಮಾಡಿ ಭಾರತದಲ್ಲಿ ಅತ್ಯುನ್ನತ ಮಟ್ಟದ ಕೆಲಸ ಯಾವುದು ಎಂದು ಕೇಳಿದ್ದಳು. ಆಗ ಅವರ ತಂದೆ ಐಎಎಸ್ ಹುದ್ದೆ ಬಗ್ಗೆ ಹೇಳಿದರು. ಭಾರತಕ್ಕೆ ಬಂದ ನಂತರ ಸೌಮ್ಯ ಅಗರ್ವಾಲ್ ನಾಗರಿಕ ಸೇವೆಗಳಿಗೆ ಹೋಗಲು ಮನಸ್ಸು ಮಾಡಿದ್ದರು.

2008 ರಲ್ಲಿ ಹೊಸದಾಗಿ ನೇಮಕಗೊಂಡ IಂS ಸೌಮ್ಯ ಅಗರ್ವಾಲ್ ಕಾನ್ಪುರದ Sಆಒ ನ ಜವಾಬ್ದಾರಿಯನ್ನು ವಹಿಸಿಕೊಂಡರು. ಸೌಮ್ಯ ಅಗರ್ವಾಲ್ ಅವರ ಅಜ್ಜ ಪಿ.ಸಿ.ಅಗರ್ವಾಲ್ ಪಿಡಬ್ಲ್ಯೂಡಿಯಲ್ಲಿ ಕೆಲಸ ಮಾಡುತ್ತಿದ್ದರು. ಜೀವನದಲ್ಲಿ ಒಮ್ಮೆ UPSಅ ಪರೀಕ್ಷೆ ಬರೆಯಬೇಕು ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಈಗ ಸೌಮ್ಯಾ ಅವರು ಅವರ ಕುಟುಂಬದ ಮೊದಲ ನಾಗರಿಕ ಸೇವಕಿಯಾಗಿದ್ದಾರೆ.

 

 

Leave a Reply

Your email address will not be published. Required fields are marked *