ಬೆಂಗಳೂರು,ಮಾ.8-True Media Kannada- ರೈಸ್ ಪುಲ್ಲಿಂಗ್ ಮಿಷನ್ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ಹಣ ಪಡೆದು ವಂಚನೆ ಸಿಸಿಬಿ ಪೊಲೀಸರು ಬಂಧಿಸಿ ರೈಸ್ ಪುಲ್ಲಿಂಗ್ ಮಿಷನ್ ಹಾಗೂ 35. ಲಕ್ಷ ರೂ. ವಶ.
ರಾಜೇಶ್(36), ಮೊಹಮ್ಮದ್ ಗೌಸ್ ಪಾಷ(52), ಸ್ಟೀಪನ್ ಅಲಿಯಾಸ್ ನಯೀಮ್(38), ಸಾಹಿಲ್(37), ಶ್ರೀನಿವಾಸ್(35), ವಿಕಾಸ್(27), ಕುಮಾರ್(29) ಮತ್ತು ಸ್ರೀವಲ್ಸ್‍ನ್(42) ಬಂಧಿತ ವಂಚಕರು. ತಮ್ಮ ಬಳಿ ತುಂಬಾ ಬೆಲೆ ಬಾಳುವ ರೈಸ್ ಪುಲ್ಲಿಂಗ್ ಮಿಷನ್ ಇದೆ ಎಂದು. ಅದು ಕೋಟ್ಯಂತರ ಬೆಲೆ ಬಾಳುತ್ತದೆ ಎಂದು ಸಾರ್ವಜನಿಕರನ್ನು ನಂಬಿಸಿ, ಈ ಮಿಷನ್ ಖರೀದಿಸಿದರೆ ನೀವು ಶ್ರೀಮಂತರಾಗುತ್ತೀರಿ ಎಂದು ಮರಳು ಮಾಡಿದ್ದಾರೆ.
ಜಂಟಿ ಪೊಲೀಸ್ ಆಯುಕ್ತ ಡಾ.ಶರಣಪ್ಪ, ಉಪಪೊಲೀಸ್ ಆಯುಕ್ತರಾದ ಯತೀಶ್ ಚಂದ್ರ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾದ ರೀನಾ ಸುವರ್ಣ, ಇನ್‍ಸ್ಪೆಕ್ಟರ್‍ಗಳಾದ ಚಂದ್ರಕಲಾ, ಚಂದ್ರಪ್ಪ ಬಾರ್ಕಿ, ಹಜರೇಶ್ ಕಕಿಲ್ಲೇದಾರ್ ಮತ್ತು ಸಿಬ್ಬಂದಿ ತಂಡ ಈ ಕಾರ್ಯಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಗಿದ್ದಾರೆ.
