ರಾಜ್ಯದಲ್ಲಿ ಕೊರೊನಾ ಉಲ್ಭಣವಾಗಿದ್ದು, ಇಂದು ಈ ಮಹಾಮಾರಿಯಿಂದಾಗಿ 46 ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 12,813 ಕ್ಕೆ ಏರಿದೆಯಾಗಿದೆ. ಇನ್ನು ಈ ದಿನ ಕೊರೊನಾ ಸೋಂಕಿನಿಂದ 3,220 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಸೋಂಕಿನಿಂದ ಗುಣಮುಖರಾದವ್ರ ಸಂಖ್ಯೆ 9,77,169ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನು ಈಗ ರಾಜ್ಯದಲ್ಲಿ 58,084 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 57,706 ರೋಗಿಗಳು ಆರೋಗ್ಯದಲ್ಲಿ ಸ್ಥಿರರಾಗಿದ್ದು, ನಿಯೋಜಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿದ್ದಾರೆ. ಆದ್ರೆ, 378 ತೀವ್ರ ನಿಗಾ ಘಟಕಗಳಲ್ಲಿದ್ದಾರೆ. ಹೊಸ ಪ್ರಕರಣಗಳು ವರದಿಯಾದ ಜಿಲ್ಲೆಗಳಲ್ಲಿ ಬೆಂಗಳೂರು ನಗರ 5,576, ಮೈಸೂರು 283, ಕಲಬುರಗಿ 211, ಬೀದರ್ 186, ಹಾಸನ 153, ತುಮಕೂರು 145, ವಿಜಯಪುರ 127, ಚಿಕ್ಕಬಳ್ಳಾಪುರ 119, ದಕ್ಷಿಣ ಕನ್ನಡ 115 ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು ನಗರ ಜಿಲ್ಲೆಯು ಧನಾತ್ಮಕ ಪ್ರಕರಣಗಳ ಪಟ್ಟಿಯಲ್ಲಿ ಮುಂದಿದ್ದು, ಹೊಂದಿದ್ದು, ಒಟ್ಟು 4,70,014, ಮೈಸೂರು 57,668 ಮತ್ತು ಬಳ್ಳಾರಿ 40,395 ಪ್ರಕರಣಗಳನ್ನು ಅನುಸರಿಸಿವೆ. ಡಿಸ್ಚಾರ್ಜ್ ಗಳ ಪೈಕಿ ಬೆಂಗಳೂರು ನಗರ 4,22,719, ಮೈಸೂರು 54,911 ಮತ್ತು ಬಳ್ಳಾರಿ 39,168 ಸ್ಥಾನಗಳೊಂದಿಗೆ ಅಗ್ರಸ್ಥಾನದಲ್ಲಿವೆ.
