ಶಿವಮೊಗ್ಗ ಬಾಲ ಕಾರ್ಮಿಕನನ್ನು ರಕ್ಷಿಸಿದ ಕಾರ್ಮಿಕ ಇಲಾಖೆ

ಶಿವಮೊಗ್ಗ,ಜುಲೈ-28, ಮಕ್ಕಳ ಸಹಾಯ ವಾಣಿಗೆ ಬಂದ ಖಚಿತ ಮಾಹಿತಿ ಮೇರೆಗೆ ಆಪ್ತ ಸಮಾಲೋಚಕರು ತಂಡದೊಂದಿಗೆ ನಗರದ ಚನ್ನಗಿರಿ ಮುಖ್ಯರಸ್ತೆಯಲ್ಲಿರುವ ಮೆ// ಕರ್ನಾಟಕ ಚಿಕನ್ ಸ್ಟಾಲ್‍ಗೆ ಭೇಟಿ ನೀಡಿ ಬಾಲಕ ಆರ್.ಅಹ್ಮದ್ ಖಾನ್ ತಂದೆ ರಹೀಮ್ ಖಾನ್ ಎಂಬ ಬಾಲಕನನ್ನು ಸುಮಾರು 1 ತಿಂಗಳಿಂದ ಮೆ// ಕರ್ನಾಟಕ ಚಿಕನ್ ಸ್ಟಾಲ್‍ನಲ್ಲಿ ಕೆಲಸಕ್ಕೆ ನೇಮಿಸಿಕೊಂಡಿರುವುದನ್ನು ಪತ್ತೆಹಚ್ಚಲಾಗಿದ್ದು, ಸಂಸ್ಥೆಯ ಮಾಲೀಕರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕನ ಹೇಳಿಕೆಯನ್ನು ಪಡೆದು ಸ್ಥಳದಲ್ಲಿ ಪರೀಶಿಲಿಸಿ, ಬಾಲಕನ ವಯಸ್ಸಿಗೆ ಸಂಬಂದಪಟ್ಟಂತೆ ಬಾಲಕನ ಪೋಷಕರಿಂದ ಬಾಲಕನ ಜನನ ಪ್ರಮಾಣ ಪತ್ರ ಮತ್ತು ಆಧಾರ್ ಗುರುತಿನ ಚೀಟಿಯ ಪ್ರಕಾರ ಬಾಲಕನ ವಯಸ್ಸು 14 ವರ್ಷಕ್ಕಿಂತ ಕಡಿಮೆ ಇರುವುದು ಕಂಡುಬಂದಿದ್ದು, ಮಾಲೀಕರು 14 ವರ್ಷದೊಳಗಿನ ಬಾಲಕನನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಬಾಲ ಕಾರ್ಮಿಕ ಮತ್ತು ಕಿಶೋರಾವಸ್ಥೆ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಕಲಂ.3ರ ಉಲ್ಲಂಘನೆಯಾಗಿದೆ.
ಬಾಲ ಕಾರ್ಮಿಕ ತಪಾಸಣಾ ತಂಡದಲ್ಲಿ ಶ್ರೀ ಪಿ. ಭೀಮೆಶ್, ಕಾರ್ಮಿಕ ನಿರೀಕ್ಷಕರು, 2ನೇ ವೃತ್ತ, ಶಿವಮೊಗ್ಗ, ರಘುನಾಥ ಎ,ಎಸ್ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಶಿವಮೊಗ್ಗ ಶ್ರೀ ಅಶೋಕ್ ಕೆ.ಬಿ, ಆಪ್ತ ಸಮಾಲೋಚಕರು, ಮಕ್ಕಳ ಸಹಾಯ ವಾಣಿ, ಶಿವಮೊಗ್ಗ ಹಾಗೂ ಗ್ರಾಮಾಂತರ ಪೋಲೀಸ್ ಠಾಣೆಯ ವೀರುಪಾಕ್ಷಪ್ಪ ಎ.ಹೆಚ್ ,ಕಾನ್ಸ್‍ಸ್ಟೇಬಲ್, ಇವರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *