ದಾವಣಗೆರೆ ಆ.20,ಚನ್ನಗಿರಿಯ ಸರ್ಕಾರಿ ಕೈಗರಿಕಾ ತರಬೇತಿ ಸಂಸ್ಥೆ (ಐಟಿಐ) ನಲ್ಲಿ ಎರಡು ವೃತ್ತಿಗಳಲ್ಲಿ (ವಿದ್ಯುತ್ ಕರ್ಮಿ ಮತ್ತು ಜೋಡಣೆ) ತರಬೇತಿಯನ್ನು ನೀಡಲಾಗುತ್ತಿದ್ದು, 2020-21 ನೇ ಶೈಕ್ಷಣಿಕ ಸಾಲಿಗೆ ಐಟಿಐ ಪ್ರವೇಶ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪಿ.ಪಿ.ಪಿ ಯೋಜನೆಯಡಿ ಮೂರು ವೃತ್ತಿಗಳಲ್ಲಿ (ವಿದ್ಯುತ್ ಕರ್ಮಿ, ಜೋಡಣೆ ಮತ್ತು ಎಂ.ಆರ್.ಎ.ಸಿ) ಶುಲ್ಕ ಸಹಿತ ಆಪ್‍ಲೈನ್ ಪ್ರವೇಶಗಳು ಲಭ್ಯವಿರುತ್ತವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆ.31 ಕಡೆಯ ದಿನವಾಗಿದೆ.
ಮಾಹಿತಿಗಾಗಿ ಕಚೇರಿ ಸಮಯದಲ್ಲಿ ಪ್ರಾಚರ್ಯರನ್ನು ಇಲಾಖೆಯ ಜಾಲತಾಣ- ಸಂಪರ್ಕಿಸಿ ವಿವರಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ 8217608288 ಸಂಪರ್ಕಿಸುವಂತೆ ಚನ್ನಗಿರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
