2020 ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ವಿವರ

ದಾವಣಗೆರೆ ಆ.11,ದಾವಣಗೆರೆ ಜಿಲ್ಲೆಯಲ್ಲಿ ಪರೀಕ್ಷೆಗೆ ಕುಳಿತ 20124 ವಿದ್ಯಾರ್ಥಿಗಳಲ್ಲಿ ಒಟ್ಟು 16051 ವಿದ್ಯಾರ್ರ್ಥಿಗಳು ಉತ್ತೀರ್ಣರಾಗಿದ್ದು, ಶೇ. 79.76 ಫಲಿತಾಂಶ ಬಂದಿದೆ.
ದಾವಣಗೆರೆ ಉತ್ತರದಲ್ಲಿ ಪರೀಕ್ಷೆಗೆ ಕುಳಿತ 3046 ವಿದ್ಯಾರ್ಥಿಗಳಲ್ಲಿ ಒಟ್ಟು 2227 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 73.11 ಫಲಿತಾಂಶ ಬಂದಿದೆ. ದಾವಣಗೆರೆ ದಕ್ಷಿಣದಲ್ಲಿ ಪರೀಕ್ಷೆಗೆ ಕುಳಿತ 5684 ವಿದ್ಯಾರ್ಥಿಗಳಲ್ಲಿ ಒಟ್ಟು 4759 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 83.72 ಫಲಿತಾಂಶ ಬಂದಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ ಪರೀಕ್ಷೆಗೆ ಕುಳಿತ 3614 ವಿದ್ಯಾರ್ಥಿಗಳಲ್ಲಿ ಒಟ್ಟು 2846 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 78.74 ಫಲಿತಾಂಶ ಬಂದಿದೆ. ಹರಿಹರ ತಾಲ್ಲೂಕಿನಲ್ಲಿ ಪರೀಕ್ಷೆಗೆ ಕುಳಿತ 3074 ವಿದ್ಯಾರ್ಥಿಗಳಲ್ಲಿ ಒಟ್ಟು 2483 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 80.70 ಫಲಿತಾಂಶ ಬಂದಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ ಪರೀಕ್ಷೆಗೆ ಕುಳಿತ 2653 ವಿದ್ಯಾರ್ಥಿಗಳಲ್ಲಿ ಒಟ್ಟು 1930 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 72.75 ಫಲಿತಾಂಶ ಬಂದಿದೆ. ಜಗಳೂರು ತಾಲ್ಲೂಕಿನಲ್ಲಿ ಪರೀಕ್ಷೆಗೆ ಕುಳಿತ 2095 ವಿದ್ಯಾರ್ಥಿಗಳಲ್ಲಿ ಒಟ್ಟು 1837 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 87.68 ಫಲಿತಾಂಶ ಬಂದಿದೆ.
2020ರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆಗಳ ವಿವರ: ದಾವಣಗೆರೆ ಉತ್ತರದ 9 ಶಾಲೆ, ದಾವಣಗೆರೆ ದಕ್ಷಿಣದ 10, ಚನ್ನಗಿರಿಯ 4, ಹರಿಹರದ 2, ಜಗಳೂರಿನ 9 ಹಾಗೂ ಹೊನ್ನಾಳಿಯ 3 ಶಾಲೆಯಲ್ಲಿ ಫಲಿತಾಂಶ ಬಂದಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಸರ್ಕಾರಿಯ 14, ಅನುದಾನಿತ 6, ಅನುದಾನರಹಿತ 17 ಸೇರಿದಂತೆ ಒಟ್ಟು 37 ಶಾಲೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ.
ಇನ್ನುಳಿದಂತೆ ದಾವಣಗೆರೆ ದಕ್ಷಿಣದ ಲೆನಿನ್ ನಗರದಲ್ಲಿನ ವಿಶ್ವಬಂಧು ಪ್ರೌಢಶಾಲೆ ಹಾಗೂ ಚನ್ನಗಿರಿಯ ಸರ್ಕಾರಿ ಉರ್ದು ಪ್ರೌಢಶಾಲೆ ಕರೇಕಟ್ಟೆ ಇಲ್ಲಿ ಶೂನ್ಯ ಫಲಿತಾಂಶ ಬಂದಿದೆ.

Leave a Reply

Your email address will not be published. Required fields are marked *