ದಾವಣಗೆರೆ ಆ.05, ಜಿಲ್ಲೆಯಲ್ಲಿ ಆ.4 ರಂದು 15.0 ಮಿ.ಮೀ ಸರಾಸರಿ ಮಳೆಯಾಗಿದ್ದು ತಾಲ್ಲೂಕುವಾರು ಮಳೆ ವಿವರ ಈ ಕೆಳಕಂಡಂತೆ ಇದೆ. ಚನ್ನಗಿರಿ ತಾಲ್ಲೂಕಿನಲ್ಲಿ 6.0 ಮಿ.ಮೀ ವಾಡಿಕೆಗೆ 16.0 ಮಿ.ಮೀ ವಾಸ್ತವ ಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 3.0 ಮಿ.ಮೀ ವಾಡಿಕೆಗೆ 14.0 ಮಿ.ಮೀ ವಾಸ್ತವ ಮಳೆಯಾಗಿದೆ. ಹರಿಹರದಲ್ಲಿ 2.0 ವಾಡಿಕೆಗೆ 19.0 ಮಿ.ಮೀ ವಾಸ್ತವ ಮಳೆಯಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ 2.0 ಮಿ.ಮೀ ವಾಡಿಕೆಗೆ 10.0 ಮಿ.ಮೀ ವಾಸ್ತವ ಮಳೆಯಾಗಿದೆ. ಜಗಳೂರು ತಾಲ್ಲೂಕಿನಲ್ಲಿ 2.0 ಮಿ.ಮೀ ವಾಡಿಕೆಗೆ 13.0 ಮಿ.ಮೀ ವಾಸ್ತವ ಮಳೆಯಾಗಿದೆ. ನ್ಯಾಮತಿ 6.0 ಮಿ.ಮೀ ವಾಡಿಕೆಗೆ 18.0 ಮಿ.ಮೀ ವಾಸ್ತವ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 4.00 ಮಿ.ಮೀ ವಾಡಿಕೆಗೆ 15.00 ಮಿ.ಮೀ ವಾಸ್ತವ ಮಳೆಯಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ 1 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, ರೂ. 50 ಸಾವಿರ ಮತ್ತು 1 ಕಚ್ಚಾ ಮನೆ ಪೂರ್ಣ ಹಾನಿಯಾಗಿದ್ದು ರೂ.80 ಸಾವಿರ ಒಟ್ಟು 1.30 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಸರ್ಕಾರದ ಮಾರ್ಗಸೂಚಿಯನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ದಾವಣಗೆರೆ ಜಿಲ್ಲೆ ಮಳೆ ವಿವರ
