ಕ್ರೀಕೆಟಿಗರಿಗೂ ಕೊರೋನಾ ಆತಂಕ ಸೌರವ್ ಗಂಗೂಲಿ ಕೊರೊನಾ ನೆಗೆಟಿವ್

ಕೋಲ್ಕತ್ತಾ ಜು,26, ಟೀಂ ಇಂಡಿಯಾ ಮಾಜಿ  ಕ್ಯಾಪ್ಟನ್  ಸೌರವ್ ಗಂಗೂಲಿ ಅವರ ಸಹೋದರ ಸ್ನೇಹಶೀಶ್ ಗಂಗೂಲಿಗೆ ಕೊರೊನಾ ವೈರಸ್ ಕಳೆದವಾರ ದೃಡ ಪಟ್ಟ ಹಿನ್ನಲೆಹೋಂ ಕ್ವಾರಂಟೈನ್ ನಲ್ಲಿದ್ದ ಸೌರವ್ ಗಂಗೂಲಿಗೆ ಕೊರೊನಾ ವೈರಸ್ ನೆಗೆಟಿವ್ ಬಂದಿದೆ.

ಸ್ನೇಹಶೀಶ್ ಗಂಗೂಲಿಗೆ ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಗಂಗೂಲಿ ತಾಯಿ ಹಾಗೂ ಕುಟುಂಬದವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ವಯಂ ಪ್ರೇರಿತರಾಗಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಶುಕ್ರವಾರ ಸಂಜೆ ಬಂದಿರುವ ವರದಿಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ.

ಇನ್ನು ಬಂಗಾಳ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಸ್ನೇಹಶಿಶ್ ಗಂಗೂಲಿ ಇದೀಗ ಕೊರೊನಾ ವೈರಸ್ ನಿಂದ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *