ಕಾಟೇರನ ಅಬ್ಬರಕ್ಕೆ ಬಾಕ್ಸ್ ಆಫೀಸ್ ಪೀಸ್ ಪೀಸ್

ಬೆಂಗಳೂರು: 02.01.2024 : ದರ್ಶನ್ ಇಲ್ಲಿಯತನಕ ಆಕ್ಷನ್ ರೋಮ್ಯಾಂಟಿಕ್ ಪಾತ್ರೆಗಳಲ್ಲಿ ಅದ್ಭುತವಾಗಿ ನಟಿಸಿ ಅಭಿಮಾನಿಗಳ ಎದೆಯೊಳಗೆ ಎದೆಯ ಮೇಲೆ ಡಿ ಬಾಸ್ ಆಗಿ ಮುದ್ರೆ ಒತ್ತಿದ್ದಾರೆ. ಆದರೆ ಕಾಟೇರ ಚಿತ್ರ ಹಿಂದಿನ ಎಲ್ಲಾ ಚಿತ್ರಗಳಿಗಿಂತ ಬೇರೆಯದ್ದೇ ತೂಕವನ್ನು ಪಡೆಯುತ್ತದೆ. ಎಲ್ಲಾ ಕ್ಯಾಟಗರಿ ಪ್ರೇಕ್ಷಕರಿಗೆ ಎಲ್ಲಾ ರೀತಿಯ ಮನರಂಜನೆಯನ್ನು ನೀಡುತ್ತದೆ. ನಿರ್ದೇಶಕ ತರುಣ್ ಸುದೀರ್ ಪ್ರಸ್ತುತ ಸಮಾಜಕ್ಕೆ ಬೇಕಾಗಿರುವ ವಸ್ತುವನ್ನು ಅದ್ಭುತವಾಗಿ ಸಿಂಗರಿಸಿ ದೊಡ್ಡ ಮಟ್ಟದಲ್ಲಿ ಸಂದೇಶವನ್ನು ತಂದು ಯುವ ಮನಗಳಲ್ಲಿ ತುಂಬುವ ಪ್ರಯತ್ನ ಮಾಡಿದ್ದಾರೆ. 70 -80 ರ ಕಾಲಘಟ್ಟದ ಕಥೆಗೆ ಪ್ರಸ್ತುತತೆಯ ಅನಿವಾರ್ಯತೆಯನ್ನು ಮಿಳಿತ ಮಾಡಿದ್ದಾರೆ.

 

ಇಂದಿರಾ ಗಾಂಧಿ ತಂದ ಉಳುವವನೆ ಭೂಮಿಯ ಒಡೆಯ ಕಾಯ್ದೆಯನ್ನು ದೇವರಾಜ ಅರಸು ಕಠಿಣವಾಗಿ ಜಾರಿಗೆ ತಂದಾಗ, ಜಮೀನ್ದಾರರು ನೂರಾರು ಎಕರೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾದಾಗ, ಬಡವರಿಗೆ ಮತ್ತು ಶ್ರೀಮಂತರಿಗೆ ನಡೆಯುವ ವರ್ಗ ಸಂದರ್ಶ ಮತ್ತು ಜಾತಿ ಸಂಘರ್ಷ ಕಥೆಯನ್ನು ಗಟ್ಟಿಯಾಗಿ ಆವರಿಸಿವೆ.

 

ಈಗಿನ ಸಿನಿಮಾಗಳಲ್ಲಿ ಸೋಶಿಯಲ್ ಎಲಿಮೆಂಟ್ಸ್ ಇಲ್ಲ, ಮನರಂಜನೆ ಇಲ್ಲ, ಕಥೆ ಚೆನ್ನಾಗಿಲ್ಲ, ತೆಲುಗು ತಮಿಳು ಹಿಂದಿ ಚಿತ್ರಗಳಂತೆ ಕ್ವಾಲಿಟಿ ಇಲ್ಲ. ಹೀರೋ ಚೆನ್ನಾಗಿಲ್ಲ, ಹೀರೋಯಿನ್ ಚೆನ್ನಾಗಿಲ್ಲ. ಬೇರೆ ಸಿನಿಮಾಗಳ ರೇಂಜೇ ಬೇರೆ ಅಂತ ಮನೆಯಲ್ಲೇ ಕೂತು ಮಾತನಾಡುವ ಮಂದಿ ಒಂದು ಬಾರಿ ಕಾಟಿರ ದರ್ಶನ ಮಾಡಿ ಬನ್ನಿ. ಆಮೇಲೆ ಮಾತನಾಡಿ.ಯಾಕಂದ್ರೇ ಈಗಾಗಲೇ 60 ಕೋಟಿಗಿಂತಲೂ ಹೆಚ್ಚು ಹಣ ಬಾಚಿಕೊಂಡಿ

Leave a Reply

Your email address will not be published. Required fields are marked *