ಹಲಸುಬಾಳು-ಕುಮಾರಪಟ್ಟಣಂ ಮಧ್ಯದ ಸೇತುವೆ ದುರಸ್ತಿಗೆ ಅಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ,ರಸ್ತೆ ತಡೆ 

ದಾವಣಗೆರೆ; ಜುಲೈ. 8 True Media Kannada : ಹರಿಹರ : ಕ್ಷೀಣಿಸುತ್ತಿರುವ ಹಲಸುಬಾಳು-ಕುಮಾರ ಪಟ್ಟಣಂ ಮಧ್ಯದ ಸೇತುವೆ ದುರಸ್ತಿಗೆ ಆಗ್ರಹಿಸಿ ಎರಡು ಗ್ರಾಮದ ಗ್ರಾಮಸ್ಥರು ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದರು. ಸಮೀಪದ ಹಲಸುಬಾಳು-ಕುಮಾರ ಪಟ್ಟಣಂ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ಇತ್ತೀಚಿನ ವಾಹನ ದಟ್ಟಣೆಯಿಂದ ಕ್ಷೀಣಿಸುತ್ತಾ ಬಂದಿದ್ದು ಸೇತುವೆಯನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿ 2 ಗ್ರಾಮದ ಗ್ರಾಹಕ ಗ್ರಾಮಸ್ಥರು ಪ್ರತಿಭಟನೆ ಮಾಡಿ ರಸ್ತೆ ತಡೆ ನಡೆಸಿದರು.

    ಪ್ರತಿಭಟನೆ ವೇಳೆ ಹಲಸಬಾಳು ಗ್ರಾಮ ನಿವಾಸಿ ಬಸವರಾಜ್ ಮಾತನಾಡಿ ಹೆದ್ದಾರಿಯ ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ ಸೇತುವೆ ಮೇಲೆ ಶೇಖರವಾಗುವ ಮಳೆ ನೀರು ಹರಿದು ಹೋಗುವ ಗುಂಡಿಗಳಲ್ಲಿ ಮಣ್ಣು ತುಂಬಿಕೊಂಡಿದ್ದು ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ಸೇತುವೆ ಮೇಲೆ ನೀರು ನಿಂತು ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ.
      ಇದಕ್ಕೆ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಅಥವಾ ಲೋಕೋಪಯೋಗಿ ಇಲಾಖೆಯವರು ಈ ಸೇತುವೆಯ ನಿರ್ವಹಣೆ ಮರೆತಿದ್ದಾರೆ ದಾವಣಗೆರೆ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸಾಗುವ ವಾಹನಗಳು ಹನಗವಾಡಿ ಕ್ರಾಸ್ ಮತ್ತು ಮಾಕನೂರು ಕ್ರಾಸ್ ನಡುವಿನ ಇದೇ ದಾರಿಯಲ್ಲಿ ಸಾಗುತ್ತಿವೆ.
     ಅದರಂತೆ ಹುಬ್ಬಳ್ಳಿ ಕಡೆಯಿಂದ ದಾವಣಗೆರೆ ಕಡೆಗೆ ಬರುವ ವಾಹನಗಳು ಮಾಕನೂರು ಕ್ರಾಸ್ ನಿಂದ ಕೋಡಿಯಾಲ ಹೊಸಪೇಟೆ ಗ್ರಾಮದ ಮೂಲಕ ಸಾಗುವ ವಾಹನಗಳು ಇದೇ ಸೇತುವೆಯ ಮೂಲಕ ಹಳೆ ಪಿ.ಬಿ ರಸ್ತೆಗೆ ಸಾಗುತ್ತವೆ ಇದರಿಂದ ಈ ಸೇತುವೆಯಲ್ಲಿ ಬರುವ ಕಾರಣಕ್ಕಾಗಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದೆ.
      ಇಲ್ಲಿನ ಗ್ರಾಮಸ್ಥರು ಗಮನಿಸಿದಂತೆ ಕಳೆದ ಐದು ವರ್ಷಗಳಿಂದ ಈ ಸೇತುವೆಯ ನಿರ್ವಹಣೆ ಮಾಡಲಾಗುತ್ತಿಲ್ಲ. ಕಾಲಕಾಲಕ್ಕೆ ಶೇಖರಣೆಯಾಗುವ ಮಣ್ಣನ್ನು ಸ್ವಚ್ಛಗೊಳಿಸಿ ಮಳೆಯ ನೀರು, ಕಿಂಡಿಗಳ ಮೂಲಕ ಸಾಗುವಂತೆ ಮಾಡಬೇಕು ಕಿಂಡಿಗಳು ಮುಚ್ಚಿರುವ ಕಾರಣ ಮಳೆ ನೀರು ಸೇತುವೆ ಮೇಲೆ ನಿಲ್ಲುವುದರಿಂದ ರಸ್ತೆಯ ಟಾರ್ ಕಿತ್ತು ಹೋಗಿದೆ ಅಲ್ಲಲ್ಲಿ ಗುಂಡಿಗಳು ಸೃಷ್ಟಿಯಾಗುವೆ ಅಕ್ಕಪಕ್ಕದಲ್ಲಿ ಗಿಡಗಂಟಿಗಳು ಬೆಳೆದಿದ್ದು ವಾಹನ ಸವಾರರಿಗೆ ಅಪಾಯ ಉಂಟುಮಾಡುತ್ತಿವೆ.
     ಎರಡು ಗ್ರಾಮದ ಗ್ರಾಮಸ್ಥರು ಈಗಾಗಲೇ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಅವರಿಂದ ಸರಿಯಾದ ಸ್ಪಂದನೆ ಬರುತ್ತಿಲ್ಲ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೇತುವೆ ಕಡೆ ಗಮನಹರಿಸಿ ದುರಸ್ತಿ ಮಾಡುವ ಕೆಲಸ ಮಾಡಬೇಕು. ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
      ವಿಷಯ ಅರಿತು ಗ್ರಾಮಾಂತರ ಠಾಣೆ ಪಿಎಸ್ಐ ಅರವಿಂದ್ ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಕಾರರ ಮನವೊಲಿಸುವ ಕೆಲಸ ಮಾಡಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಸೇತುವೆ ದುರಸ್ತಿ ಬಗ್ಗೆ ಚರ್ಚೆ ನಡೆಸಲು ತಿಳಿಸುವದಾಗಿ ನೀಡಿದ ಭರವಸೆಯ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದರು.

Leave a Reply

Your email address will not be published. Required fields are marked *