ಆಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ.. ಸಿಬ್ಬಂದಿ ಸೇವೆಗೆ ಸಾರ್ವಜನಿಕರಿಂದ ಪ್ರಶಂಸೆ

ಹರಿಹರ : ಜಿಲ್ಲಾ ಆಂಬುಲೆನ್ಸ್ ನಲ್ಲಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಹರಿಹರದಲ್ಲಿ ನಡೆದಿದೆ.
    ನಗರದ ಜೈ ಭೀಮ್ ನಗರ ನಿವಾಸಿ ಅಕ್ಕಮ್ಮ ಮಗುಗೆ ಜನ್ಮ ನೀಡಿದ ಮಹಾ ತಾಯಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ತಾಯಿಯನ್ನು ಹರಿಹರ ಸಾರ್ವಜನಿಕ ಆಸ್ಪತ್ರೆಯಲ್ಲಿ  ದಾಖಲು ಮಾಡಿದಾಗ  ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ, ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ (ಸಿಜೀರಿಯನ್) ಮೂಲಕಆಗಿದ್ದು, ಈಗ ಸಹಜ (ನಾರ್ಮಲ್) ಹೆರಿಗೆ ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
    ಆದ್ದರಿಂದ ಕೂಡಲೇ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಹೋಗಲು ಸಲಹೆ ನೀಡಿದ ಹಿನ್ನೆಲೆಯ ಕಾರಣಕ್ಕೆ ತಕ್ಷಣವೇ ಆರೋಗ್ಯ ರಕ್ಷಾ ಕವಚ 108 ಆಂಬುಲೆನ್ಸ್ ಗೆ ಕರೆ ಮಾಡಿ ಇಎಂಟಿ ಸಿಬ್ಬಂದಿ ಸುರೇಶ್ ಮತ್ತು ಅಂಬುಲೆನ್ಸ್ ವಾಹನ ಚಾಲಕ ನಟರಾಜ್ ತಕ್ಷಣವೇ ಸ್ಪಂದಿಸಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗು ವಾಗ ದಾರಿ ಮಧ್ಯೆ ತೀವ್ರವಾದ ಹೆರಿಗೆ ನೋವು ಕಾಣಿಸಿಕೊಂಡಿದೆ.
   ಕೂಡಲೇ ಇಎಂಟಿ ಸ್ಟಾಫ್ ಸಿಬ್ಬಂದಿ ಹೆರಿಗೆ ಮಾಡಿಸುವುದಕ್ಕೆ ಹರಸಾಹಸ ಪಟ್ಟು ಆಂಬುಲೆನ್ಸ್ ವಾಹನದಲ್ಲಿ ಹೆರಿಗೆ ಮಾಡಿಸುವ ಮೂಲಕ ತಾಯಿ ಮತ್ತು ಮಗುವಿನ ಸುರಕ್ಷಿತವಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ.108 ಆಂಬುಲೆನ್ಸ್ ನ ಸೇವೆಯನ್ನು ರೋಗಿಯ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *