ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆ

ದಾವಣಗೆರೆ ಜೂ.30, ಕೋವಿಡ್-19 ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ವಿನೂತನವಾಗಿ ಉಪನಿರ್ದೇಶಕರು ಮಾನಸಿಕ ಆರೋಗ್ಯ ವಿಭಾಗದ ನಿರ್ದೇಶನದಂತೆ ಸಾಮಾಜಿಕ ಮಾಧ್ಯಮವಾದ ಫೇಸ್‍ಬುಕ್ ಖಾತೆಯಲ್ಲಿ ಲೈವ್ ವಿಡಿಯೋ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳಾದ ಡಾ.ರಾಘವೇಂದ್ರ ಸ್ವಾಮಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳಾದ ಡಾ.ಮುರುಳೀಧರ್ ಪಿ.ಡಿ ಇವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯರಾದ ಡಾ. ಗಂಗಂ ಸಿದ್ದಾರೆಡ್ಡಿ ಮಾಹಿತಿ ನೀಡಿದರು.
ಡಾ.ಗಂಗಂಸಿದ್ದಾರೆಡ್ಡಿ ಮಾತನಾಡಿ ಪ್ರಸ್ತುತ ದಿನದÀಲ್ಲಿ ಸಮಾಜ ಹೇಗೆ ಅಭಿವೃದ್ಧಿ ಪತದಲ್ಲಿ ಸಾಗುತ್ತಿದೆಯೋ ಹಾಗೆಯೇ ಕೆಲ ದುಷ್ಚಟಗಳಿಂದ ಸಮಾಜ ಹಾಳಾಗುತ್ತಿದ್ದು, ನಾನಾ ರೀತಿಯ ಸಮಸ್ಯೆಗಳನ್ನು ಎದುರುಸುತ್ತೀದ್ದೆವೆ. ಅವುಗಳೆಂದರೆ ಯುವಪೀಳಿಗೆಯ ದುರ್ಬಳಕೆ, ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ಲೈಂಗಿಕ ಕಿರುಕುಳ, ಅತ್ಯಾಚಾರ, ಹಲ್ಲೆ, ಕೊಲೆ, ಮತ್ತು ಸುಲಿಗೆ ಹಾಗೂ ಸಮಾಜಕ್ಕೆ ಹಾನಿಕಾರಕವಾಗಿರುವಂತಹ ಇನ್ನೂ ಅನೇಕ ರೀತಿಯಲ್ಲಿ ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರುಸುತ್ತಿದ್ದೇವೆ.
ಅಭಿವೃದ್ದಿಗೆ ಮಾರಕವಾಗಿರುವ ಮಾದಕ ದ್ರವ್ಯ ಮತ್ತು ಮದ್ಯಪಾನ ಬಳಕೆಗೆ ಯುವಜನತೆ ತುತ್ತಾಗುತ್ತಿರುವುದು ವಿಷಾಧÀನೀಯವಾಗಿದೆ. ದುರದೃಷ್ಟಕರ ಸಂಗತಿಯೆಂದರೆ ಭಾರತದಲ್ಲಿ ಶೇ.22 ರಷ್ಟು ಮಾದಕ ವ್ಯಸನಕ್ಕೆ ಒಳಗಾಗುತ್ತಿದ್ದಾರೆ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಜನತೆಯೂ ತಂಬಾಕು ಬಳಕೆಗೆ ಹೆಚ್ಚಿನದಾಗಿ ಒಳಗಾಗುತ್ತಿದ್ದಾರೆ. ಈ ಎಲ್ಲಾ ವಿಷಯಗಳನ್ನು ಅರಿತು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಜೂನ್ 26 ರಂದು ಅಂತರಾಷ್ಟ್ರಿಯ ಮಾದಕ ವ್ಯಸನ ಹಾಗೂ ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚÀರಣೆಯನ್ನು ಆಚರಿಸುತ್ತಿದ್ದು, ಈ ಬಾರಿಯ ಘೋಷವಾಕ್ಯ “ಉತ್ತಮ ಜ್ಞಾನದಿಂದ ಉತ್ತಮ ಆರೈಕೆ” ಎಂಬ ಘೋಷಣೆಗಳ ಮೂಲಕ ಸಮುದಾಯದಲ್ಲಿ ನಮ್ಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ವತಿಯಿಂದ ಶಾಲಾ-ಕಾಲೇಜು, ಸರ್ಕಾರೇತರ ಸಂಸ್ಥೆಯ ಸಹಯೋಗದೊಂದಿಗೆ ಜಾಗೃತಿಯನ್ನು ಮೂಡಿಸುತ್ತಿದ್ದೆವೆ.
ಮಾದಕ ದ್ರವ್ಯ ವ್ಯಸನದ ಆರಂಭ ಹೇಗೆ: ಮೊದ ಮೊದಲು ಮದ್ಯವನ್ನು ಕುತೂಹಲಕ್ಕಾಗಿ ಸೇವಿಸಲು ಆರಂಭಿಸುತ್ತೇವೆ. ಜನರು ತಮ್ಮೊಳಗಿನ ಒತ್ತಡವನ್ನು ಶಮನಗೊಳಿಸಲೆಂದೋ, ಸ್ನೇಹಿತರ ಒತ್ತಾಯಕ್ಕೋ, ಶೈಕ್ಷಣಿಕ ಅಥವಾ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಒಲವಿನಿಂದಲೋ ಅಥವಾ ಅವರಲ್ಲಿನ ಒತ್ತಡ ಹಾಗೂ ಸಮಸ್ಯೆಗಳನ್ನು ಮರೆಯಲೆಂದೋ ಮಾದಕ ದ್ರವ್ಯಗಳನ್ನು ಉಪಯೋಗಿಸಲು ಆರಂಭಿಸುತ್ತಾರೆ.
ಕ್ರಮೇಣ ಡ್ರಗ್ಸ್ ಬಳಕೆಯಿಂದ, ಮಿದುಳಿನಲ್ಲಿ ಬದಲಾವಣೆ ಉಂಟಾಗಿ ವ್ಯಕ್ತಿಗಳು ಮಾದಕ ವಸ್ತುಗಳನ್ನು ಹೆಚ್ಚು ಹೆಚ್ಚು ಬಯಸುವಂತೆ ಮಾಡುತ್ತದೆ. ಅಂತಹವರು ಅದರ ಸೇವನೆಯನ್ನು ನಿಯಂತ್ರಣ ಮಾಡಲಾಗದೆ ಹೋಗುತ್ತಾರೆ. ವ್ಯಕ್ತಿಗಳು ಅವರ ಮನೋ ಸಾಮಥ್ರ್ಯ ಕಳೆದುಕೊಳ್ಳುತ್ತಾರೆ. ಹವ್ಯಾಸದಿಂದ ಹೊರಬರಬೇಕೆಂದು ನಿಜವಾಗಿ ಬಯಿಸಿದರು ಸಾಧ್ಯವಾಗದೇ, ಮತ್ತೆ ಮತ್ತೆ ಅದರೆಡೆಗೆ ಆಕರ್ಷಿತರಾಗುತ್ತಾರೆ.
ದುರ್ಬಲ ವ್ಯಕ್ತಿತ್ವ ಹಾಗೂ ಮನೋ ಸಾಮಥ್ರ್ಯ ಕಡಿಮೆ ಇದ್ದವರು ಮಾದಕ ದ್ರವ್ಯ ವ್ಯಸನಿಗಳಾಗುತ್ತಾರೆ. ವ್ಯಸನಿಗಳು ಸೋಮಾರಿಗಳಾಗುವುದರಿಂದ ಅವರ ವರ್ತನೆಯಲ್ಲಿ ಬದಲಾವಣೆ ಸಾಧ್ಯವಿಲ್ಲ: ‘ಇನ್ನು ಮುಂದೆ ಡ್ರಗ್ ಸೇವನೆ ಮಾಡುವುದಿಲ್ಲ’ ಎಂದು ದೃಢ ನಿಶ್ಚಯಮಾಡಿದರೆ ಈ ಚಟದಿಂದ ಹೊರ ಬರಬಹುದು ಎಂಬ ಸಾಮಾನ್ಯವಾದ ಕಲ್ಪನೆಗಳು ಸಮಾಜದಲ್ಲಿದೆ. ವಾಸ್ತವವೆಂದರೆ ವ್ಯಸನಿಗಳಾಗಲು ವಂಶವಾಹಿ ಮತ್ತು ಸುತ್ತಮುತ್ತಲಿನ ವಾತಾವರಣ ಹೆಚ್ಚಿನ ಕಾರಣವಾಗಿರಬಹುದು. ಜೊತೆಗೆ ಇದು ವ್ಯಕ್ತಿಗತ ಆಯ್ಕೆಯು ಆಗಿರಬಹುದು. ‘ಸೇವನೆ ಮಾಡುವುದಿಲ್ಲ’ ಎಂದು ನಿರ್ಧಾರ ಮಾಡುವುದು ಡ್ರಗ್ ತ್ಯಜಿಸುವ ಒಂದು ಸಣ್ಣ ಭಾಗ ಆದರೆ. ಡ್ರಗ್ ಸೇವನೆಯಿಂದ ಅವರು ಸಂಪೂರ್ಣವಾಗಿ ಅದರಿಂದ ಹೊರಬರಲು ಚಿಕಿತ್ಸೆ ಮತ್ತು ಹೆಚ್ಚಿನ ಸಹಕಾರ ಅಗತ್ಯ. ಧೂಮಪಾನ, ಗಾಂಜಾ ಮುಂತಾದವುಗಳನ್ನು ಸೇದುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು, ಜಗಿಯುವುದು ಮತ್ತು ಕುಡಿಯುವುದು ಮುಂತಾಗಿ ಅನೇಕ ವಿಧದಲ್ಲಿ ಮಾದಕ ದ್ರವ್ಯಗಳನ್ನು ಬಳಸಲಾಗುತ್ತದೆ. ಭಾರತದಲ್ಲಿ ಗಾಂಜಾ, ತಂಬಾಕು ಮತ್ತು ವೈದ್ಯರ ಸಲಹೆ ಪಡೆಯದೇ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ಮುಂತಾದವು ವ್ಯಸನಿಗಳು ಹೆಚ್ಚಾಗಿ ಬಳಸುವ ಮಾದಕ ದ್ರವ್ಯಗಳು.
ಮಾದಕ ದ್ರವ್ಯ ಸೇವನೆಯಿಂದ ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ : ಡ್ರಗ್ ಸೇವನೆಯಿಂದ ಮನುಷ್ಯನ ಮಿದುಳಿನ ನರಗಳಲ್ಲಿ ಡೋಪಮೈನ್ ಎನ್ನುವ ಸಂವಾಹಕ ಬಿಡುಗಡೆಯಾಗುತ್ತದೆ. ಯಾವಾಗ ನೀವು ಮಾದಕ ವಸ್ತುಗಳನ್ನು ಬಳಸುತ್ತೀರೊ ಇದು ಮಿದುಳಿನ ಸಂದೇಶದ ವ್ಯವಸ್ಥೆಯನ್ನು ಪುನರಾವರ್ತಿಸುತ್ತದೆ. ಹೀಗೆ ಡೋಪಮೈನ್ ಬಿಡುಗಡೆಯಾಗಿ, ಮಿದುಳಿನಲ್ಲಿ ಸಂತೋಷ ಉಂಟಾಗುತ್ತದೆ. ಮಿದುಳು ಮತ್ತೆ ಮತ್ತೆ ಸಂತೋಷ ಪಡಲು ಬಯಸಿ, ಮಾದಕ ದ್ರವ್ಯವನ್ನು ಹೆಚ್ಚು ಹೆಚ್ಚಾಗಿ ಬಳಸುವಂತೆ ಉತ್ತೇಜಿಸುತ್ತದೆ. ನೀವು ನಿರಂತರವಾಗಿ ಮಾದಕ ವಸ್ತುಗಳನ್ನು ಸೇವಿಸಿದರೆ, ಕ್ರಮೇಣವಾಗಿ ಮಿದುಳಿನ ಸೂಕ್ಷ್ಮತೆ ಕಡಿಮೆಯಾಗುತ್ತದೆ. ಮೊದ ಮೊದಲು ಯಾವ ಪ್ರಮಾಣದ ಮಾದಕ ದ್ರವ್ಯವನ್ನು ನೀವು ಸೇವಿಸುತ್ತಿದ್ದಿರೋ ಅದಕ್ಕಿಂತ ಹೆಚ್ಚಿನ ಪ್ರಮಾಣವನ್ನು ಸೇವಿಸುವುದರಿಂದ ಮಾತ್ರ ನಿಮಗೆ ಈ ಮೊದಲು ಉಂಟಾಗುತ್ತಿದ್ದ ಸಂತೋಷದ ಅನುಭವ ಸಿಗುತ್ತದೆ ಎಂಬ ಭ್ರಮೆಗೆ ಸಿಲುಕುತ್ತೀರಿ. ಮಾದಕ ದ್ರವ್ಯ ವ್ಯಸನದಿಂದ ಮಿದುಳಿನ ಆಲೋಚನಾ ಕ್ರಮದಲ್ಲಿ ಗೊಂದಲಗಳು ಉಂಟಾಗುತ್ತದೆ. ಇದು ವ್ಯಕ್ತಿಗಳಿಗೆ ಯಾವ ಪ್ರಯೊಜನವನ್ನು ನೀಡುವುದಿಲ್ಲ.
ದೀರ್ಘಕಾಲ ಡ್ರಗ್ಸ್ ಸೇವನೆಯು ಮಿದುಳಿನ ಅರಿವಿನ ಕಾರ್ಯಕ್ಷಮತೆಯನ್ನು ಹಾನಿಗೊಳಸಬಹುದು. ಅಧ್ಯಯನಗಳು ತಿಳಿಸುವಂತೆ, ದೀರ್ಘಕಾಲದ ಡ್ರಗ್ ಸೇವನೆಯಿಂದ ಮಿದುಳಿನ ಕ್ರಿಯೆಗಳಾದ ಕಲಿಕೆ, ತೀರ್ಪು, ನಿರ್ಧಾರ, ವರ್ತನೆ ನಿಯಂತ್ರಣ ಮುಂತಾದವುಗಳ ನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆ ಮತ್ತು ಬೇರೆ ರೀತಿಯ ಮಾನಸಿಕ ಅಸ್ವಸ್ಥತೆಗೆ ಒಳಗಾಗಬಹುದು.
ಈ ಎಲ್ಲಾ ಪಾನಿಂiÀiಗಳು ಈಥೈಲ್ ಆಲ್ಕೊಹಾಲ್ ಗುಣ ಹೊಂದಿದ್ದು, ಅವುಗಳಲ್ಲಿರುವ ಮೂಡ್ ಬದಲಾಯಿಸುವ ಅಂಶವು ದೇಹದ ಮೇಲೆ ಹಲವು ರೀತಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿಯೊಂದು ಮದ್ಯಪಾನೀಯಗಳಲ್ಲಿ ಈಥೈಲ್ ಆಲ್ಕೊಹಾಲ್ ಪ್ರಮಾಣ ಮಾತ್ರ ಬೇರೆ ಬೇರೆಯಾಗಿರುತ್ತದೆ. ಮದ್ಯವು ಮಾನವನ ಆರೋಗ್ಯದ ಮೇಲೆ ಹೀಗೆ ಪರಿಣಾಮ ಬೀರುತ್ತದೆ.
ವ್ಯಸನವನ್ನು ಸೂಚಿಸುವ ಇನ್ನಿತರ ಕೆಲವು ಸೂಚಕಗಳು: ವ್ಯಕ್ತಿಯು ಮಾದಕ ವಸ್ತುವಿನ ಬಗ್ಗೆ ಯಾವಾಗಲು ಯೋಚಿಸುತ್ತಿದ್ದರೆ: (ನಾನು ಮತ್ತೆ ಯಾವಾಗ ಕುಡಿಯುತ್ತೇನೆ/ಧೂಮಪಾನ ಮಾಡುತ್ತೇನೆ. ಇದರ ಬದಲಿಗೆ ಎನನ್ನು ತೆಗೆದುಕೊಳ್ಳಲಿ, ಅದನ್ನು ಎಲ್ಲಿಂದ ಪಡೆಯಲಿ, ಹೇಗೆ ಪಡೆಯಲಿ? ಇತ್ಯಾದಿ ಚಿಂತನೆಗಳು) ವಿತ್ ಡ್ರಾವೆಲ್ ಲಕ್ಷಣಗಳು: ವ್ಯಕ್ತಿಯು ಒಂದಷ್ಟು ದಿನ ಮಾದಕ ವಸ್ತುಗಳನ್ನು ಸೇವಿಸದೇ ಇದ್ದಾಗ ಅವರಲ್ಲಿ ನಡುಕ, ಕಿರಿಕಿರಿ, ತೀವ್ರ ಬಯಕೆ ಉಂಟಾಗಿ ಮಾನಸಿಕ ಹಾಗೂ ಭಾವನಾತ್ಮಕ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ.
ವ್ಯಸನಕ್ಕೆ ಚಿಕಿತ್ಸೆ: “ಆಪ್ತ-ಸಮಾಲೋಚನೆ ಪಡೆದು ವ್ಯಸನದಿಂದ ಮುಕ್ತರಾಗಬಹುದು” ಮದ್ಯ ಸೇವನೆಯಿಂದ ಹೊರಬರುವ ಮೊದಲ ಹೆಜ್ಜೆಯೆಂದರೆ ನಿಮಗೆ ತೊಂದರೆಯಿದೆ ಎನ್ನುವುದನ್ನು ಒಪ್ಪಿಕೊಳ್ಳುವುದು ಮತ್ತು ಸಹಾಯ ಪಡೆಯುವುದು. ವ್ಯಸನವು ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ನಿರಂತರವಾಗಿ ಕಾಡುವ ಮತ್ತೆ ಮತ್ತೆ ಮರುಕಳುಹಿಸಬಹುದಾದ ಅಸ್ವಸ್ಥತೆ ಚಿಕಿತ್ಸೆಯ ನಂತರ ವ್ಯಸನ ಮರುಕಳಿಸಿತೆಂದರೆ ಚಿಕಿತ್ಸೆ ವಿಫಲವಾಯಿತೆಂದಲ್ಲ. ಬದಲಿಗೆ ಆ ವ್ಯಕ್ತಿಗೆ ಮಾದಕ ವಸ್ತುವಿನ ವ್ಯಸನದಿಂದ ಹೊರಬರಲು ಹೆಚ್ಚಿನ ಸಹಾಯದ ಅಗತ್ಯವಿದೆ ಎಂದರ್ಥ.
ಮದ್ಯವ್ಯಸನದ ಚಿಕಿತ್ಸೆ ಗುರಿಗಳು : ರೋಗಿಯು ಮದ್ಯವನ್ನು ಬಳಸದಂತೆ ತಡೆಯುವುದು ಮತ್ತು ಮದ್ಯ ಮುಕ್ತವಾದÀ ಅವರು ಇಚ್ಚಿಸಿದ ಹೊಸ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಸಹಾಯ ಮಾಡುವುದು.
ಮಾದಕ ದ್ರವ್ಯ ವ್ಯಸನದಿಂದ ಹೊರಬರಲು ಚಿಕಿತ್ಸೆಯ ಅವಶ್ಯಕತೆಯಿರುತ್ತದೆ. : ವ್ಯಕ್ತಿಯ ದೇಹದಿಂದ ಮಾದಕ ವಸ್ತುವಿನಿಂದಾದ ವಿಷಕಾರಕ ಪರಿಣಾಮಗಳನ್ನು ನಿವಾರಿಸುವುದು. ಅತಿಯಾದ ಬಯಕೆ ಮತ್ತು ವ್ಯಸನ ತ್ಯಜಿಸಬೇಕೆಂಬ ಭಾವನೆಗಳನ್ನು ನಿಭಾಯಿಸುವ ವ್ಯಕ್ತಿಗೆ ಸಹಾಯ ಮಾಡುವುದು. ವ್ಯಸನಕ್ಕೆ ಸಂಬಂಧಿಸಿದಂತೆ, ಯಾವುದೇ ಮಾನಸಿಕ ಮತ್ತು ಭಾವನಾತ್ಮಕ ವಿಷಯಗಳನ್ನು ನಿರ್ವಹಿಸಲು ವ್ಯಕ್ತಿಗೆ ಸಹಾಯ ಮಾಡುವುದು. ವ್ಯಕ್ತಿಯು ಅವರ ಮಾದಕ ದ್ರವ್ಯ ವ್ಯಸನದ ಬಗ್ಗೆ ಗಮನ ನೀಡದಂತೆ, ಹೊಸ ಜೀವನ ಶೈಲಿ ರೂಪಿಸಿಕೊಳ್ಳಲು ಸಹಾಯ ಮಾಡುವುದು ಹಾಗೂ ಪ್ರೇರಣೆ ನೀಡುವುದು.
ಮಾದಕ ದ್ರವ್ಯ ವ್ಯಸನದ ಚಿಕಿತ್ಸೆಯು ಕೂಡ ಉಳಿದ ವ್ಯಸನಗಳ ಚಿಕಿತ್ಸೆಯಂತೆಯೇ ಇರುತ್ತದೆ. ಔಷಧೋಪಚಾರ, ವ್ಯಕ್ತಿಗತ ಆರೈಕೆ ಮತ್ತು ಗುಂಪು ಚಿಕಿತ್ಸೆಗಳ ಸಂಯೋಜನೆಗಳನ್ನು ಇದು ಒಳಗೊಂಡಿರುತ್ತದೆ. ಚಿಕಿತ್ಸೆಯ ಪ್ರತಿಯೊಂದು ಅಂಶವು ರೋಗಿಗಳ ವೈದ್ಯಕೀಯ ಇತಿಹಾಸ, ತೆಗೆದುಕೊಂಡ ಮಾದಕ ದ್ರವ್ಯ, ಅದರಿಂದಾದ ಪರಿಣಾಮಗಳನ್ನು ಅವಲಂಬಿಸಿ ನಿರ್ಧರಿಸಲ್ಪಡುತ್ತದೆ. ಜೊತೆಗೆ ಆಪ್ತ ಸಮಾಲೋಚನೆ, ಯೋಗ, ಧ್ಯಾನ, ಮನರಂಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುವುದರಿಂದ ಆ ಮಾದಕ ವಸ್ತುಗಳಿಂದ ವ್ಯಕ್ತಿಗಳು ದೂರ ಉಳಿಯುವಂತೆ ಮಾಡುವುದು, ವ್ಯಸನ ಮತ್ತೆ ಮತ್ತೆ ಮರುಕಳಿಸದಂತೆ ತಡೆಗಟ್ಟುವುದು ಹಾಗೂ ಅವುಗಳನ್ನು ನಿಭಾಯಿಸುವ ಕೌಶಲ್ಯಗಳನ್ನು ವ್ಯಕ್ತಿಗಳಲ್ಲಿ ತುಂಬುವ ಗುರಿಯನ್ನು ಚಿಕಿತ್ಸೆ ಹೊಂದಿದೆ.
ಹೆಚ್ಚಿನ ರೋಗಿಗಳಿಗೆ ಕಡಿಮೆ ಅವಧಿಯ ಆಸ್ಪತ್ರೆಯ ಚಿಕಿತ್ಸೆ ಅಗತ್ಯವಿರುತ್ತದೆ. ಆ ನಂತರದ ಪುನಶ್ಚೇತನದ ಮತ್ತು ಮುಂದಿನ ಹಂತಗಳ ಅನುಸರಣೆಯ ಅವಧಿಗಳು ವ್ಯಸನ ಮುಕ್ತ ಜೀವನವನ್ನು ನಿಭಾಯಿಸಲು ಸಹಾಯ ಮಾಡುತ್ತವೆ. ರೋಗ ಲಕ್ಷಣ ಮರುಕಳಿಸದಂತೆ ತಡೆಯಲು ಇರುವ ಉತ್ತಮ ವಿಧಾನ. ಇದರಿಂದ ರೋಗಿಗಳು ತಿರುಗಿ ವ್ಯಸನಿಗಳಾಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *