ದಾವಣಗೆರೆ ಜು.24,ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಹಾಗೂ ಪಾನ್‍ಮಸಾಲ ಉತ್ಪನ್ನಗಳ ಸೇವನೆಯನ್ನು ಹಾಗೂ ಉಗಿಯುವುದನ್ನು ನಿಷೇಧಿಸಲಾಗಿದೆ.
ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಹಾಗೂ ಪಾನ್‍ಮಸಾಲ್ ಉತ್ಪನ್ನಗಳನ್ನು ಜಗಿದು ಉಗಿಯುವದರಿಂದ ಕೋವಿಡ್-19 ರೋಗವು ಇತರರಿಗೆ ಹರಡುವ ಸಂಭವ ಇರುತ್ತದೆ ಆಧ್ದರಿಂದ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಕೋವಿಡ್-19 ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಸರ್ಕಾರದ ಅಧೀನ ಕಾರ್ಯಧರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆಯುಕ್ತರು, ಆರೋಗ್ಯ & ಕು. ಕ ಸೇವೆಗಳು ಇವರು ರಾಜ್ಯದ ಎಲ್ಲ ಜಿಲ್ಲೆಯ “ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಹಾಗೂ ಪಾನ್‍ಮಸಾಲ್ ಉತ್ಪನ್ನಗಳ ಸೇವನೆಯನ್ನು ಹಾಗೂ ಉಗಿಯುವುದನ್ನು ನಿಷೇಧಿಸಿ ಆದೇಶಿಸಿರುವ ಪ್ರಯುಕ್ತ ಜಿಲ್ಲೆಯ ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ಈ ಆದೇಶವನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಆದ್ದರಿಂದ ಸಾರ್ವಜನಿಕರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಣೆಯಾದಲ್ಲಿ ಭಾರತೀಯದಂಡ ಸಂಹಿತೆ (IPಅ) ಸೆಕ್ಷನ್- 188, 268, 269ರ ಅಡಿಯಲ್ಲಿ ಪ್ರಾಧೀಕೃತ ಅಧಿಕಾರಿಗಳು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು-ಪಾನ್‍ಮಸಾಲ ಉತ್ಪನ್ನ ಸೇವೆನೆ ನಿಷೇಧ
